ಧರ್ಮಸ್ಥಳದ ವಿವಿದೆಡೆ ಹಲವು ಮೃತದೇಹಗಳನ್ನು ಹೂತಿರುವದಾಗಿ ಹೇಳಿಕೆ ನೀಡಿರುವ ಅನಾಮಿಕ ನೀಡಿದ ದೂರಿನ ಅನ್ವಯ ಎಸ್ ಐ ಟಿ ತೀವ್ರ ತನಿಖೆ ಕೈಗೊಂಡಿದೆ.
ನಿನ್ನೆಯಷ್ಟೇ ಸುಮಾರು 13 ಕಡೆಗೆ ಮೃತದೇಹಗಳನ್ನು ಹೂತಿರುವ ಜಾಗೆ ತೋರಿಸಿರುವ ಕಡೆಗಳಲ್ಲಿ ಗುರುತು ಮಾಡಿಕೊಳ್ಳಲಾಗಿತ್ತು.
ಇಂದು ಎಸ್ ಐ ಟಿ ಹೂತಿರುವ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ಆರಂಭಿಸಿದೆ. ಸ್ಥಳಕ್ಕೆ ವಿಧಿ ವಿಜ್ಞಾನ ತಜ್ಞರು, ಕ್ರೈಮ್ ಅಧಿಕಾರಿಗಳು ಉಪಸ್ಥಿತರಿದ್ದಾರೆ.
ಮೃತದೇಹಗಳನ್ನು ಹೊರತೆಗೆಯುವ ಕಾರ್ಯಕ್ಕೆ ಸುಮಾರು 20 ಕ್ಕೂ ಹೆಚ್ಚು ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ.
