ಧರ್ಮಸ್ಥಳ ಉದ್ವಿಗ್ನ : ಯೂ ಟ್ಯೂಬರ್ಸ್ ವರದಿಗಾರರ ಮೇಲೆ ಹಲ್ಲೆ

ಧರ್ಮಸ್ಥಳ ಪ್ರಕರಣ ದೇಶದಲ್ಲಿ ಸದ್ದು ಮಾಡುತ್ತಿದ್ದು, ಇಂದು ಧರ್ಮಸ್ಥಳ ಗಲಾಟೆಗೆ ಸಾಕ್ಷಿಯಾಗಿದೆ. ದೊಡ್ಡ ಸಂಖ್ಯೆಯಲ್ಲಿದ್ದ ಯುವಕರು ವರದಿ ಮಾಡುತ್ತಿದ್ದ ಯೂ ಟ್ಯೂಬರ್ಸ್ ವರದಿಗಾರರ ಮೇಲೆ ಹಲ್ಲೆ ನಡೆಸಿದ್ದಾರೆ. 

ವಿಶೇಷ ತನಿಖಾ ತಂಡದ (SIT) ತನಿಖೆಯ ವರದಿಯ ಸಮಯದಲ್ಲಿ ಧರ್ಮಸ್ಥಳ ಗ್ರಾಮದಲ್ಲಿ ನಾಲ್ವರು ಮಾಧ್ಯಮ ಪ್ರತಿನಿಧಿಗಳ (ಯೂಟ್ಯೂಬರ್‌ಗಳು) ಮೇಲೆ ಹಲ್ಲೆ ನಡೆದಿದ್ದು, ಘಟನೆಯಲ್ಲಿ ಕ್ಯಾಮರಾ ಹಾಗೂ ವಾಹನಗಳು ಜಖಂ ಗೊಂಡಿವೆ. 

ಕುಡ್ಲ ರಾಂಪೇಜ್ ಚಾನೆಲ್ ನಡೆಸುತ್ತಿರುವ ಯೂಟ್ಯೂಬರ್ ಮತ್ತು ಯುನೈಟೆಡ್ ಮೀಡಿಯಾದ ಇನ್ನೊಬ್ಬ ವ್ಯಕ್ತಿಯನ್ನು ಥಳಿಸಲಾಗಿದೆ. ಇಬ್ಬರನ್ನೂ ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಈ ಘಟನೆ 2012 ರಲ್ಲಿ ದೌರ್ಜನ್ಯಕ್ಕೆ ಒಳಗಾದ ಸೌಜನ್ಯ ಅವರ ಮನೆಯ ಬಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. 

ಹಲವರು ಪೈಪ್‌ಗಳು ಮತ್ತು ಇತರ ವಸ್ತುಗಳನ್ನು ಹಿಡಿದುಕೊಂಡು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೂರು ದಾಖಲಿಸಲು ಹಲವಾರು ಜನರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ್ದಾರೆ.

Share

Leave a Comment