ಹೆಲಿಕಾಪ್ಟರ್ ದುರಂತದಲ್ಲಿ ಘಾನಾ ದೇಶದ ರಕ್ಷಣಾ ಸಚಿವ ಸೇರಿದಂತೆ 8 ಜನ ಮೃತಪಟ್ಟಿದ್ದಾರೆ.
ಘಾನಾದ ರಕ್ಷಣಾ ಸಚಿವ ಎಡ್ವರ್ಡ್ ಒಮಾನೆ ಬೋಮಾ ಅವರು ಬುಧವಾರ ಮಿಲಿಟರಿ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಅವರ ಜೊತೆ ಇತರ ನಾಲ್ವರು ಅಧಿಕಾರಿಗಳು ಮತ್ತು ಮೂವರು ವಾಯುಪಡೆಯ ಸಿಬ್ಬಂದಿಯೊಂದಿಗೆ ಸಾವನ್ನಪ್ಪಿದ್ದಾರೆ ಎಂದು ಘಾನಾ ಸರ್ಕಾರ ತಿಳಿಸಿದೆ.
ಬೋಮಾ, ಪರಿಸರ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಇಬ್ರಾಹಿಂ ಮುರ್ತಲಾ ಮುಹಮ್ಮದ್ ಮತ್ತು ಇತರರು ಸಾವನ್ನಪ್ಪಿದ ಅಪಘಾತವು ರಾಷ್ಟ್ರೀಯ ದುರಂತ ಎಂದು ಅಧ್ಯಕ್ಷ ಜಾನ್ ಮಹಾಮಾ ಅವರ ಮುಖ್ಯಸ್ಥ ಜೂಲಿಯಸ್ ಡೆಬ್ರಾ ಖಚಿತಪಡಿಸಿದ್ದಾರೆ.
