ಕೇರಳದಲ್ಲೊಬ್ಬ ಸರಣಿ ಹಂತಕ ಶ್ರೀಮಂತ ಮಹಿಳೆಯರೇ ಈತನ ಟಾರ್ಗೆಟ್

ದೇವರ ನಾಡು ಕೇರಳದಲ್ಲಿ ರಾಕ್ಷಸನೊಬ್ಬ ಸರಣಿ ಹತ್ಯೆ ಮಾಡುವ ಮೂಲಕ ಸಿಕ್ಕಿ ಬಿದ್ದಿದ್ದಾನೆ. 

ಕೇರಳದಲ್ಲಿ ಸರಣಿ ಹತ್ಯೆಗಳನ್ನು ಮಾಡಿದ ಸೆಬಾಸ್ಟಿಯನ್ ವಾಸವಿದ್ದ ಅಲಪ್ಪುಳದಲ್ಲಿರುವ ಮನೆಯಲ್ಲಿ ಹಲವಾರು ಮಾನವ ಆಸ್ತಿ ಪಂಜರಗಳು ಸಿಕ್ಕಿವೆ. 

ಶ್ರೀಮಂತ ಮಹಿಳೆಯರನ್ನೇ ಈತ ಟಾರ್ಗೆಟ್ ಮಾಡುತ್ತಿದ್ದುದು ತನಿಖೆಯಿಂದ ಬೆಳಕಿಗೆ ಬಂದಿದೆ. 

ಕೇರಳ ಪೊಲೀಸರು ಜಿನಮ್ಮ ಕೊಲೆ ಕೇಸನ್ನು ಬೆನ್ನು ಹತ್ತಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. 

ಆಲಪ್ಪುಳ ಜಿಲ್ಲೆಯ ಚೆರ್ತಲಾದ ಸೆಬಾಸ್ಟಿಯನ್, ಮಹಿಳೆಯರಿಗೆ, ಸಹಾಯ, ಆರ್ಥಿಕ ನೆರವು ಮತ್ತು ಸಣ್ಣ ಕೆಲಸಗಳನ್ನು ನೀಡುವ ಮೂಲಕ ಮಹಿಳೆಯರನ್ನು ತನ್ನ ಮನೆಗೆ ಆಹ್ವಾನಿಸುತ್ತಿದ್ದ ಎಂದು ತನಿಖಾಧಿಕಾರಿಗಳಿಂದ ಸ್ಪೋಟಕ ಸುದ್ದಿ ಬಯಲಾಗಿದೆ.

ಮಧ್ಯವಯಸ್ಕ ಮಹಿಳೆಯರನ್ನು ಒಳಗೊಂಡ, ಸುಮಾರು ಎರಡು ದಶಕಗಳಲ್ಲಿ ಹರಡಿರುವ ನಾಪತ್ತೆಗಳ ಸರಮಾಲೆಯೇ ತನಿಖಾಧಿಕಾರಿಗಳನ್ನು ಅಂತಿಮವಾಗಿ ಚೆರ್ತಲಾದ 67 ವರ್ಷದ ರಿಯಲ್ ಎಸ್ಟೇಟ್ ಬ್ರೋಕರ್ ಸೆಬಾಸ್ಟಿಯನ್ ಸಿ.ಎಂ. ಬಳಿಗೆ ಕರೆದೊಯ್ಯಿತು ಎನ್ನಲಾಗಿದೆ.

2006 ರಲ್ಲಿ ಬಿಂದು ಪದ್ಮನಾಭನ ನಾಪತ್ತೆ ಪ್ರಕರಣ, 2012 ರಲ್ಲಿ ಆಯಿಷಾ ನಾಪತ್ತೆ ಪ್ರಕರಣ, 2020 ರಲ್ಲಿ ಸಿಂಧು ನಾಪತ್ತೆ ಪ್ರಕರಣ, 2024 ರಲ್ಲಿ ಧಾಖಲಾದ ಜಿನಮ್ಮ ನಾಪತ್ತೆ ಪ್ರಕರಣ ಬಯಲಾಗಿವೆ. ಇವರೆಲ್ಲರ ಕೊಲೆಗಳನ್ನು ಸೆಬಾಷ್ಟಿಯನ್ ಮಾಡಿರುವದು ಬೆಳಕಿಗೆ ಬಂದಿದೆ.

Share

Leave a Comment