ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಮನೆಯೊಂದರಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.
ತಾಲೂಕಿನ ವಿವಿದೆಡೆ ಆಗಾಗ ಚಿರತೆ ಪ್ರತ್ಯಕ್ಷವಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ನಾಡಿಗೇರಿ ಓಣಿಯಲ್ಲಿರುವ ಕಾಕಿ ಅವರ ಮನೆಯ ಮೆಟ್ಟಿಲುಗಳ ಮೇಲೆ ಚಿರತೆ ಕೂತಿದ್ದನು ನೋಡಿ ಜನರ ಗಾಬರಿಯಾಗಿದ್ದಾರೆ.
ಮನೆಯಲ್ಲಿದವರು ತಕ್ಷಣ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಇಡೀ ಓಣಿಯ ಜನರು ಗಾಬರಿಯಾಗಿದ್ದು, ಚಿರತೆ ಹಿಡಿಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
